Ixigo IPO Review: ಇಕ್ಸಿಗೊ ಐಪಿಒಗೆ ಅರ್ಜಿ ಸಲ್ಲಿಸುವಿರಾ? ixigo IPOದ ಕುರಿತು ಹೆಚ್ಚಿನ ವಿವರ ಇಲ್ಲಿ ತಿಳಿದುಕೊಂಡು ಸೂಕ್ತ ನಿರ್ಣಯ ತೆಗೆದುಕೊಳ್ಳಿ

by

·

,

Ixigo IPO Review: ixigo IPO 740.10 ಕೋಟಿ ರೂಪಾಯಿಯ ಬುಕ್‌ ಬಿಲ್ಡ್‌ ಇಶ್ಯೂ. ಫ್ರೆಶ್‌ ಇಶ್ಯೂ ಮೂಲಕ 1.39 ಕೋಟಿ ಷೇರುಗಳಿಂದ 120.00 ಕೋಟಿ ರೂಪಾಯಿ ಮತ್ತು ಆಫರ್‌ ಫಾರ್‌ ಸೇಲ್‌ ಮೂಲಕ 6.67 ಷೇರುಗಳನ್ನು ನೀಡಿ 620.10 ಕೋಟಿ ರೂಗಳನ್ನು ಒಟ್ಟುಗೂಡಿಸುವ ಉದ್ದೇಶವನ್ನು ಹೊಂದಲಾಗಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ixigo IPOವನ್ನು ಜೂನ್ 18, 2024ರಂದು ಬಿಎಸ್‌ಇ ಎನ್‌ಎಸ್‌ಇಯಲ್ಲಿ ಲಿಸ್ಟ್ ಮಾಡುವ ಯೋಜನೆ ಹೊಂದಲಾಗಿದೆ.

ಜೂನ್‌ 10ರಂದು ಇಕ್ಸಿಗೊ ಐಪಿಒ ಚಂದದಾರಿಕೆಗೆ ತೆರೆಯಲಿದೆ. ಜೂನ್‌ 13ರಂದು ಐಪಿಒ ಹಂಚಿಕೆಯಾಗುವ ನಿರೀಕ್ಷೆಯಿದೆ. ಜೂನ್‌ 18ರಂದು ಅರ್ಜಿದಾರರ ಪೋರ್ಟ್‌ಪೋಲಿಯೊಗೆ ಸೇರಿ ಬಿಎಸ್‌ಇ ಎನ್‌ಎಸ್‌ಇಯಲ್ಲಿ ಲಿಸ್ಟ್‌ ಆಗಲಿದೆ. ತಕ್ಷಣ ಲಾಭ ಪಡೆಯಲು ಬಯಸುವವರು ತಕ್ಷಣ ಮಾರಾಟ ಮಾಡಬಹುದು.ದೀರ್ಘಕಾಲದಲ್ಲಿ ಲಾಭ ಮಾಡಲು ಬಯಸುವ ಷೇರು ಹೂಡಿಕೆದಾರರು ಈ ಷೇರನ್ನು ಇಟ್ಟುಕೊಳ್ಳಲು ಬಯಸಬಹುದು. ಇಕ್ಸಿಗೊ ಐಪಿಒದ ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.ಈ ವೆಬ್‌ಸೈಟ್‌ನ ಆರಂಭಿಕ ದಿನಾಂಕಗಳಲ್ಲಿ ಐಪಿಒಗಳ ಸಂಕ್ಷಿಪ್ತ ಮಾಹಿತಿ ನೀಡಲಾಗುವುದು. ಬಳಕೆದಾರರ ಆಸಕ್ತಿಯನ್ನು ನೋಡಿಕೊಂಡು ವಿವರವಾದ ವಿಮರ್ಶೆ, ಐಪಿಒಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು. ಹೀಗಾಗಿ, ಬಳಕೆದಾರರು ಈ ವೆಬ್‌ ತಾಣದ ಕುರಿತು ಹೆಚ್ಚಿನ ಜನರಿಗೆ ಮಾಹಿತಿ ನೀಡಲು ಪ್ರಯತ್ನಿಸಿ.

ixigo IPOದಲ್ಲಿ ಪ್ರತಿಷೇರಿಗೆ 88ರಿಂದ 93 ರೂಪಾಯಿ ನಿಗದಿಪಡಿಸಲಾಗಿದೆ. ಕನಿಷ್ಠ 161 ಷೇರುಗಳ ಒಂದು ಲಾಟ್‌ಗೆ ಅರ್ಜಿಸಲ್ಲಿಸಬಹುದು. ಒಂದು ಲಾಟ್‌ ಇಕ್ಸಿಗೊ ಐಪಿಒ ಖರೀದಿಸಲು ರಿಟೇಲ್‌ ಹೂಡಿಕೆದಾರರು 14,973 ರೂಪಾಯಿ ಹೊಂದಿರಬೇಕು. ಎಸ್‌ಎನ್‌ಐ ಖರೀದಿದಾರರು ಕನಿಷ್ಠ 14 ಲಾಟ್‌ಗಳು ಅಂದರೆ 2,254 ಷೇರುಗಳಿಗೆ ಅರ್ಜಿ ಸಲ್ಲಿಸಬಹುದು. ಇದಕ್ಕೆ 209,622 ರೂಪಾಯಿ ಬೇಕು. ಬಿಎನ್‌ಐಐ ಹೂಡಿಕೆದಾರರು 67 ಲಾಟ್‌ಗಳು ಅಂದರೆ 10,787 ಷೇರುಗಳಿಗೆ ಅರ್ಜಿ ಸಲ್ಲಿಸಬಹುದು. ಇದಕ್ಕೆ 1,003,191 ರೂಪಾಯಿ ಬೇಕು.

ಇಕ್ಸಿಗೊ ಕಂಪನಿಯ ಪರ್ಫಾಮೆನ್ಸ್‌ ಹೇಗಿದೆ?

ಕಂಪನಿಯ ಸ್ವತ್ತು (ಅಸೆಟ್‌): 2021ರ ಮೇ 31ರಂದು 185.07 ಕೋಟಿ ರೂಪಾಯಿ, ಮೇ 31, 2022ರಲ್ಲಿ 538.47 ಕೋಟಿ ರೂಪಾಯಿ, ಮಾರ್ಚ್‌ 31, 2023ರಲ್ಲಿ 585.93 ಕೋಟಿ ರೂಪಾಯಿ, ಡಿಸೆಂಬರ್‌ 31, 2023ರಲ್ಲಿ 678.71 ಕೋಟಿ ರೂಪಾಯ ಇತ್ತು. ಹೀಗಾಗಿ ಕಂಪನಿಯ ಅಸೆಟ್‌ ಏರಿಕೆಯಲ್ಲಿದೆ.
ಕಂಪನಿಯ ಆದಾಯ: ರೆವೆನ್ಯೂ ವಿಷಯದಲ್ಲಿ ಕಂಪನಿಯ ಪರ್ಪಾಮೆನ್ಸ್‌ ಈ ಮುಂದಿನಂತೆ ಇದೆ. 2021ರ ಮೇ 31ರಂದು 138.41 ಕೋಟಿ ರೂಪಾಯಿ, ಮೇ 31, 2022ರಲ್ಲಿ 384.94 ಕೋಟಿ ರೂಪಾಯಿ, ಮಾರ್ಚ್‌ 31, 2023ರಲ್ಲಿ 517.57 ಕೋಟಿ ರೂಪಾಯಿ, ಡಿಸೆಂಬರ್‌ 31, 2023ರಲ್ಲಿ 497.10 ಕೋಟಿ ರೂಪಾಯ ಇತ್ತು.
ತೆರಿಗೆಯ ಬಳಿಕ ಲಾಭ (ಪ್ರಾಫಿಟ್‌ ಆಫ್ಟರ್‌ ಟ್ಯಾಕ್ಸ್‌): 2021ರ ಮೇ 31ರಂದು 7.53 ಕೋಟಿ ರೂಪಾಯಿ, ಮೇ 31, 2022ರಲ್ಲಿ -21.09 ಕೋಟಿ ರೂಪಾಯಿ, ಮಾರ್ಚ್‌ 31, 2023ರಲ್ಲಿ 23.40 ಕೋಟಿ ರೂಪಾಯಿ, ಡಿಸೆಂಬರ್‌ 31, 2023ರಲ್ಲಿ 65.71 ಕೋಟಿ ರೂಪಾಯ ಇತ್ತು.
ಕಂಪನಿಯ ನಿವ್ವಳ ಮೌಲ್ಯ: 2021ರ ಮೇ 31ರಂದು 29.94 ಕೋಟಿ ರೂಪಾಯಿ, ಮೇ 31, 2022ರಲ್ಲಿ 342.69 ಕೋಟಿ ರೂಪಾಯಿ, ಮಾರ್ಚ್‌ 31, 2023ರಲ್ಲಿ 373.76 ಕೋಟಿ ರೂಪಾಯಿ, ಡಿಸೆಂಬರ್‌ 31, 2023ರಲ್ಲಿ 437.13 ಕೋಟಿ ರೂಪಾಯ ಇತ್ತು.
ರಿಸರ್ವ್ಸ್‌ ಮತ್ತು ಸರ್‌ಪ್ಲಸ್‌: 2021ರ ಮೇ 31ರಂದು -212.60 ಕೋಟಿ ರೂಪಾಯಿ, ಮೇ 31, 2022ರಲ್ಲಿ 303.22 ಕೋಟಿ ರೂಪಾಯಿ, ಮಾರ್ಚ್‌ 31, 2023ರಲ್ಲಿ 334.17 ಕೋಟಿ ರೂಪಾಯಿ, ಡಿಸೆಂಬರ್‌ 31, 2023ರಲ್ಲಿ 399.83 ಕೋಟಿ ರೂಪಾಯ ಇತ್ತು.
ಒಟ್ಟು ಸಾಲ: 2021ರ ಮೇ 31ರಂದು 14.94 ಕೋಟಿ ರೂಪಾಯಿ, ಮೇ 31, 2022ರಲ್ಲಿ 2.73 ಕೋಟಿ ರೂಪಾಯಿ, ಮಾರ್ಚ್‌ 31, 2023ರಲ್ಲಿ 0.54 ಕೋಟಿ ರೂಪಾಯಿ, ಡಿಸೆಂಬರ್‌ 31, 2023ರಲ್ಲಿ 43.36 ಕೋಟಿ ರೂಪಾಯ ಇತ್ತು.

Comments

Leave a Reply

Your email address will not be published. Required fields are marked *