Ola Electric IPO Details: ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಯು ಮಾರುಕಟ್ಟೆ ನಿಯಂತ್ರಕ ಸೆಬಿಯಿಂದ ಐಪಿಒ (Ola Electric IPO) ವಿತರಣೆಯ ಅನುಮತಿ ಪಡೆದಿದೆ. ಈ ಐಪಿಒ ಮೂಲಕ ಸುಮಾರು 7,250 ಕೋಟಿ ರೂಪಾಯಿ ಬಂಡವಾಳ ಸಂಗ್ರಹಿಸಲು ಉದ್ದೇಶಿಸಿದೆ. ಓಲಾ ಎಲೆಕ್ಟ್ರಿಕ್ ಕಂಪನಿಯು ಐಪಿಒಗೆ ಅರ್ಜಿ ಸಲ್ಲಿಸಿದ ಭಾರತದ ಮೊದಲ ಎಲೆಕ್ಟ್ರಿಕ್ ವಾಹನ ದ್ವಿಚಕ್ರ ವಾಹನ ತಯಾರಕಾ ಕಂಪನಿಯಾಗಿದೆ. ಕಂಪನಿಯು ಕಳೆದ ವರ್ಷ ಡಿಸೆಂಬರ್ನಲ್ಲಿ ಡಿಆರ್ಎಚ್ಪಿ (draft red herring prospectus ) ಸಲ್ಲಿಸಿತ್ತು.
Ola Electric IPO Details: ಓಲಾ ಎಲೆಕ್ಟ್ರಿಕ್ ಐಪಿಒಗೆ ಅರ್ಜಿ ಸಲ್ಲಿಸಲು ಸಿದ್ಧರಾಗಿ
ಓಲಾ ಎಲೆಕ್ಟ್ರಿಕ್ನ ಐಪಿಒ 5,500 ಕೋಟಿ ರೂಪಾಯಿಗಳ ಹೊಸ ವಿತರಣೆ ಮತ್ತು 1,750 ಕೋಟಿ ರೂಪಾಯಿಗಳ ಮಾರಾಟದ ಕೊಡುಗೆ (OFS) ಒಟ್ಟು 7,250 ಕೋಟಿ ರೂಪಾಯಿಗಳನ್ನು ಒಳಗೊಂಡಿದೆ. ಸಂಸ್ಥೆಯ DRHP ಪ್ರಕಾರ ಅಸ್ತಿತ್ವದಲ್ಲಿರುವ ಷೇರುದಾರರು 95.19 ಮಿಲಿಯನ್ ಷೇರುಗಳನ್ನು OFS ನಲ್ಲಿ ಮಾರಾಟ ಮಾಡುತ್ತಾರೆ ಎಂದು ಹೇಳಲಾಗಿದೆ.
ಇದನ್ನು ಓದಿ: What is IPO?: ಆರಂಭಿಕ ಷೇರು ವಿತರಣೆ ಎಂದರೇನು? ಐಪಿಒದಲ್ಲಿ ಹೂಡಿಕೆ ಮಾಡುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳೇನು?
ಓಲಾ ಎಲೆಕ್ಟ್ರಿಕ್ನ ಸಂಸ್ಥಾಪಕ ಭವಿಶ್ ಅಗರ್ವಾಲ್ 47.3 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಲಿದ್ದಾರೆ. ಸಂಸ್ಥೆಯ ಆರಂಭಿಕ ಹೂಡಿಕೆದಾರರಾದ – ಆಲ್ಫಾವೇವ್, ಆಲ್ಪೈನ್, ಡಿಐಜಿ ಇನ್ವೆಸ್ಟ್ಮೆಂಟ್, ಮ್ಯಾಟ್ರಿಕ್ಸ್ ಮತ್ತು ಇತರರು ಸಹ 47.89 ಮಿಲಿಯನ್ ಷೇರುಗಳನ್ನು OFS ಮೂಲಕ ಮಾರಾಟ ಮಾಡಲಿದ್ದಾರೆ.
ಕ್ಯಾಪೆಕ್ಸ್, ಸಾಲ ಮರುಪಾವತಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಗಾಗಿ ಓಲಾ ಎಲೆಕ್ಟ್ರಿಕ್ ಐಪಿಒ ಹಣವನ್ನು ಬಳಸಿಕೊಳ್ಳುತ್ತದೆ. ಸಂಸ್ಥೆಯು ಸುಮಾರು 1,226 ಕೋಟಿ ರೂಪಾಯಿಗಳನ್ನು ಕ್ಯಾಪೆಕ್ಸ್ಗಾಗಿ ಮತ್ತು 800 ಕೋಟಿ ರೂಪಾಯಿಗಳನ್ನು ಸಾಲವನ್ನು ಮರುಪಾವತಿಸಲು ಬಳಸುತ್ತದೆ. ಸುಮಾರು 1,600 ಕೋಟಿ ರೂ.ಗಳನ್ನು ಕಂಪನಿಯ ರಿಸರ್ಚ್ ಆಂಡ್ ಡೆವಲಪ್ಮೆಂಟ್ಗೆ ಮತ್ತು 350 ಕೋಟಿ ರೂಪಾಯಿಯನ್ನು ಕಂಪನಿಯ ಸಾಂಸ್ಥಿಕ ಪ್ರಗತಿಗೆ ಬಳಸಲಿದೆ.
ಓಲಾ ಎಲೆಕ್ಟ್ರಿಕ್ ಕಂಪನಿಯು ಪ್ರಸ್ತುತ EV ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸುಮಾರು ಶೇಕಡ 52 ಮಾರುಕಟ್ಟೆ ಪಾಲನ್ನು ಹೊಂದಿದೆ. ಸರ್ಕಾರದ VAHAN ವೆಬ್ಸೈಟ್ನ ಮಾಹಿತಿಯ ಪ್ರಕಾರ, ಕಂಪನಿಯು ತಿಂಗಳಲ್ಲಿ 34,000 ಯುನಿಟ್ಗಳನ್ನು ನೋಂದಾಯಿಸಿದೆ, ಇದು ವರ್ಷದಿಂದ ವರ್ಷಕ್ಕೆ 54% ಬೆಳವಣಿಗೆಯನ್ನು ಸೂಚಿಸುತ್ತದೆ.
ಓಲಾ ಎಲೆಕ್ಟ್ರಿಕ್ ಮಾರ್ಚ್ 2023 ರ ಆರ್ಥಿಕ ವರ್ಷದಲ್ಲಿ ಸುಮಾರು 510 ಪ್ರತಿಶತದಷ್ಟು 2,782 ಕೋಟಿ ರೂಪಾಯಿಗಳ ಏಕೀಕೃತ ಆದಾಯವನ್ನು ವರದಿ ಮಾಡಿದೆ, ಹೆಚ್ಚಿದ ವೆಚ್ಚಗಳಿಂದಾಗಿ ಅದರ ನಿವ್ವಳ ನಷ್ಟವು 1,472 ಕೋಟಿಗೆ ವಿಸ್ತರಿಸಿದೆ.
2023-24 ಮೊದಲ ತ್ರೈಮಾಸಿಕದಲ್ಲಿ ಓಲಾ ಎಲೆಕ್ಟ್ರಿಕ್ ಒಟ್ಟು ರೂ 1,272 ಕೋಟಿ ಆದಾಯ ಮತ್ತು ರೂ 267 ಕೋಟಿ ನಷ್ಟವನ್ನು ವರದಿ ಮಾಡಿದೆ. ಕಂಪನಿಯು ಜೂನ್ 30, 2023 ರಂತೆ 2,111 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿದೆ. ಓಲಾ ಎಲೆಕ್ಟ್ರಿಕ್ ಐಪಿಒ ಆರಂಭಿಕ ದಿನಾಂಕ (ola electric ipo date) ಸೇರಿದಂತೆ ಹೆಚ್ಚಿನ ವಿವರಕ್ಕಾಗಿ ಇದೇ ಪುಟ ನೋಡುತ್ತ ಇರಿ. ಓಲಾ ಎಲೆಕ್ಟ್ರಿಕ್ ಐಪಿಒ ದಿನಾಂಕ, ಓಲಾ ಎಲೆಕ್ಟ್ರಿಕ್ ಐಪಿಒ ಸುದ್ದಿಗಳು, ಓಲಾ ಎಲೆಕ್ಟ್ರಿಕ್ ಐಪಿಒ ಅರ್ಜಿ ಸಲ್ಲಿಕೆ, ಓಲಾ ಎಲೆಕ್ಟ್ರಿಕ್ ಐಪಿಒ ದರ (Ola electric ipo price), ಓಲಾ ಎಲೆಕ್ಟ್ರಿಕ್ ಐಪಿಒ ಜಿಎಂಪಿ (ola electric ipo gmp) ವಿವರಗಳನ್ನು ಲಾಭಗುರು ಶೀಘ್ರದಲ್ಲಿ ಅಪ್ಡೇಟ್ ಮಾಡಲಿದೆ.