What is IPO?: ಹೊಸದಾಗಿ ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಿಗೆ ಐಪಿಒ ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಐಪಿಒಗೆ ಅರ್ಜಿ ಸಲ್ಲಿಸಿ ಐಪಿಒ ಹಂಚಿಕೆಯಾದ ಒಂದೇ ವಾರದಲ್ಲಿ ಒಂದೆರಡು ಸಾವಿರ ರೂಪಾಯಿಯಿಂದ ಹತ್ತಿಪ್ಪತ್ತು ಸಾವಿರ ರೂಪಾಯಿವರೆಗೆ ಲಾಭ ಬರುವಂತಹ ಐಪಿಒಗಳನ್ನು ನೋಡಿ ಪ್ರತಿನಿತ್ಯ ಐಪಿಒಗಳಲ್ಲಿ ಹೂಡಿಕೆ ಮಾಡುವವರು ಇದ್ದಾರೆ. ಸಾಕಷ್ಟು ಜನರು ಈ ರೀತಿ ಐಪಿಒ ಖರೀದಿ ಮತ್ತು ಐಪಿಒ ಷೇರು ಮಾರಾಟದ ಮೂಲಕ ಅಲ್ಪಾವಧಿ ಗಳಿಕೆ ಮಾಡುತ್ತ ಇರುತ್ತಾರೆ. ಇನ್ನು ಕೆಲವರು ಈ ರೀತಿ ಅಲೋಟ್‌ಮೆಂಟ್ ಆದ ಐಪಿಒ ಷೇರುಗಳನ್ನು ದೀರ್ಘಕಾಲ ಇಟ್ಟುಕೊಂಡು ಲಾಭ ಪಡೆಯುವ ಉದ್ದೇಶ ಹೊಂದಿರುತ್ತಾರೆ. ಐಪಿಒ ವ್ಯವಹಾರ ಮಾಡುವ ಮುನ್ನ ಐಪಿಒ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಐಪಿಒ ಹೂಡಿಕೆ ಹಿಂದಿರುವ ಅಪಾಯಗಳೇನು? ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.
ಖಾಸಗಿ ಕಂಪನಿಯೊಂದು ತನ್ನ ಕಂಪನಿಯ ಷೇರುಗಳನ್ನು ಮೊದಲ ಬಾರಿಗೆ ಸಾರ್ವಜನಿಕರಿಗೆ ಮಾರಾಟ ಮಾಡುವುದನ್ನು ಆರಂಭಿಕ ಷೇರು ವಿತರಣೆ ಅಥವಾ ಇನಿಶಿಯಲ್ ಪಬ್ಲಿಕ್ ಆಫರ್ ಎಂದು ಹೇಳಬಹುದು. ಐಪಿಒದ ಮೂಲಕ ಖಾಸಗಿ ಮಾಲಿಕತ್ವದ ಕಂಪನಿಯೊಂದು ಸಾರ್ವಜನಿಕ ಮಾಲಿಕತ್ವದ ಕಂಪನಿಯಾಗುತ್ತದೆ. ಇದೇ ಕಾರಣಕ್ಕೆ ಐಪಿಒ ಪ್ರಕ್ರಿಯೆಯನ್ನು “ಸಾರ್ವಜನಿಕವಾಗುವುದು” ಎಂದೂ ಹೇಳಲಾಗುತ್ತದೆ.
ಹೊಸ ಕಂಪನಿಗಳು ಅಥವಾ ಹತ್ತು ಹಲವು ವರ್ಷಗಳಿಂದ ವ್ಯವಹಾರ ಮಾಡುತ್ತಿರುವ ಕಂಪನಿಗಳು ಐಪಿಒ ಮೂಲಕ ಪಬ್ಲಿಕ್ ಆಗಲು ಬಯಸಬಹುದು. ಕಂಪನಿಯ ಸಾಲಗಳನ್ನು ತೀರಿಸುವ ಸಲುವಾಗಿ, ಕಂಪನಿಯ ಭವಿಷ್ಯದ ಯೋಜನೆಗಳಿಗೆ ಹಣ ಕ್ರೋಡೀಕರಿಸುವ ಉದ್ದೇಶದಿಂದ ಅಥವಾ ಇನ್ನಿತರ ಉದ್ದೇಶಗಳಿಂದ ಕಂಪನಿಯೊಂದು ಐಪಿಒ ಮೂಲಕ ಬಂಡವಾಳ ಹೆಚ್ಚಿಸಿಕೊಳ್ಳಲು ಬಯಸುತ್ತದೆ. ಕಂಪನಿಯ ಖಾಸಗಿ ಪಾಲುಗಳಲ್ಲಿ ಒಂದಿಷ್ಟು ಭಾಗವನ್ನು ಅಥವಾ ಎಲ್ಲಾ ಭಾಗವನ್ನು ಸಾರ್ವಜನಿಕವಾಗಿ ಷೇರುಗಳ ರೂಪದಲ್ಲಿ ಮಾರಾಟ ಮಾಡುವ ಪ್ರಕ್ರಿಯೆ ಇದಾಗಿದೆ.
ಕಂಪನಿಯೊಂದು ಪಬ್ಲಿಕ್‌ಗೆ ಹೋಗಲು ಬಯಸಿ ಐಪಿಒ ಬಿಡುಗಡೆ ಮಾಡಲು ಬಯಸಬಹುದು. ಸೆಕ್ಯುರೀಟಿಸ್ ನೋಂದಣಿ ಪ್ರಕ್ರಿಯೆ ಮತ್ತು ಸಾರ್ವಜನಿಕರಿಗೆ ಷೇರುಗಳನ್ನು ವಿತರಣೆ ಮಾಡುವ ಕೆಲಸಕ್ಕಾಗಿ ಲೀಡ್ ಅಂಡರ್‌ರೈಟರ್ ಅನ್ನು ಆ ಕಂಪನಿಯು ಆಯ್ಕೆ ಮಾಡಿಕೊಳ್ಳುತ್ತದೆ. ಈ ಲೀಡ್ ಅಂಡರ್‌ರೈಟರ್ ಇದಾದ ಬಳಿಕ ವಿವಿಧ ಹೂಡಿಕೆ ಬ್ಯಾಂಕ್‌ಗಳನ್ನು ಮತ್ತು ಬ್ರೋಕರ್ ಡೀಲರ್ಸ್‌ಗಳನ್ನು (ಸಿಂಡಿಕೇಟ್) ಸಿದ್ಧಪಡಿಸಿ ಐಪಿಒ ಪ್ರಕ್ರಿಯೆಆರಂಭಿಸುತ್ತದೆ. ಹೂಡಿಕೆ ಬ್ಯಾಂಕ್‌ಗಳು ಮತ್ತು ಸಿಂಡಿಕೇಟ್‌ಗಳು ಸಾಂಸ್ಥಿಕ ಮತ್ತು ವೈಯಕ್ತಿಕ ಹೂಡಿಕೆದಾರರಿಗೆ ಐಪಿಒದ ಮೂಲಕ ಷೇರುಗಳನ್ನು ಮಾರಾಟ ಮಾಡುತ್ತವೆ.
ಐಪಿಒಗಳಲ್ಲಿ ಹಲವು ವಿಧಗಳಿವೆ. ಈಗಾಗಲೇ ಷೇರುಪೇಟೆಯಲ್ಲಿ ಷೇರುಗಳನ್ನು ಹೊಂದಿರುವ ಕಂಪನಿಗಳೂ ಐಪಿಒದ ಮೂಲಕ ಮತ್ತಷ್ಟು ಬಂಡವಾಳ ಕ್ರೋಡೀಕರಿಸಬಹುದು. ಫಾಲೋ ಆನ್ ಆಫರಿಂಗ್, ಸೆಕೆಂಡರಿ ಆಫರಿಂಗ್ ಮುಂತಾದ ವಿಧಗಳಲ್ಲಿ ಬಂಡವಾಳ ಕ್ರೋಡೀಕರಿಸಬಹುದು. ಈ ರೀತಿ ವಿವಿಧ ಬಗೆಯ ಐಪಿಒಗಳ ಕುರಿತು ಮುಂದಿನ ಲೇಖನಗಳಲ್ಲಿ ಇನ್ನಷ್ಟು ವಿವರ ಪಡೆಯೋಣ.
What is IPO?: IPO stands for Initial Public Offering. It is an attractive option for those who want to invest in the stock market. By applying for an IPO and subscribing to IPO shares, individuals can earn profits ranging from a few thousand to several tens of thousands of dollars in just one to two weeks. Many people engage in IPO buying and selling for short-term gains. However, some individuals hold allocated IPO shares for an extended period to gain long-term profits. Understanding how IPO works and the risks involved is crucial before engaging in IPO transactions. US English is the standard form of the English language used in the United States. It is characterized by specific vocabulary, grammar, and pronunciation conventions that differ from other variants of English spoken in different countries.
Leave a Reply